Wednesday, February 4, 2009

Devara Dasimayya - Jeevana

ಗುಲ್ಬರ್ಗಾ ಜಿಲ್ಲೆಯಲ್ಲಿರುವ ಸುರಪುರ ತಾಲ್ಲೂಕಿನ ಮುದನೂರು ಎಂಬ ಊರಿನಲ್ಲಿ ದೇವರ ದಾಸಿಮಯ್ಯನವರು ಜನಿಸಿದರು. ಈ ಊರಿನಲ್ಲಿ ಸುಮಾರು ದೇವರ ದೇವಾಲಯಗಳು ಇದೆ. ಎಲ್ಲಾ ಪಂಥಗಳ ದೇವಸ್ಥಾನಗಳನ್ನು ಹೊಂದಿದ ಕ್ಷೇತ್ರವಿದು. ಎಲ್ಲಕ್ಕಿಂತ ರಾಮನಾಥ ಎನ್ನುವ ದೇವರ ಮೇಲೆ ಹೆಚ್ಚಿನ ಪ್ರೀತಿ ದೇವರ ದಾಸಿಮಯ್ಯನವರಿಗೆ. ಈಗಾಗಿ ತಮ್ಮ ವಚನಗಳಿಗೆ "ರಾಮನಾಥ" ಎನ್ನುವ ನಾಮಾಂಕಿತವನ್ನು ನೀಡಿದ್ದಾರೆ. ಇವರು ನೇಯ್ಗೆ ವೃತ್ತಿಯಿಂದ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. 10ನೇ ಶತಮಾನದಲ್ಲಿ ಬರುವ ಇವರು ಮೊಟ್ಟ ಮೊದಲ ವಚನಕಾರರಾಗಿದ್ದಾರೆ. ಇವರ ಪತ್ನಿ ದುಗ್ಗಳೆ. ಇಬ್ಬರದೂ ಅನ್ಯೋನ್ಯವಾದ ದಾಂಪತ್ಯ ಜೀವನ. ದೇವರನ್ನು ಒಲಿಸಲು ಮತ್ತು ಮುಕ್ತಿಯನ್ನು ಪಡೆಯಲು ಸನ್ಯಾಸಿಯ ಜೀವನ ಮಾಡಬೇಕಿಲ್ಲ, ವಿವಾಹ ಜೀವನದಲ್ಲಿಯೂ ಮೋಕ್ಷವನ್ನು ಪಡೆಯಬಹುದು ಮತ್ತು ಶಿವನ ಸಾಕ್ಷಾತ್ಕಾರವನ್ನು ಪಡೆಯಬಹುದೆಂದು ನಿರೂಪಿಸಿದವರು.
Related Posts Plugin for WordPress, Blogger...

Devara Dasimayya Blog Popular Posts

My Blog List

Facebook Followers