Tuesday, June 15, 2010

ವಚನಗಳು/Vachanas,


ಕರಸ್ಥಲದ ಜ್ಯೋತಿಯದು,ಕರುವಿಟ್ಟೆರದವದು
ಅದರ ನೆಲೆಯ ತಿಳಿದರೆ ನಿಜಾನಂದವಿಹುದು
ಹೊಲಬುದೋರದಿಹ ನಿಸ್ಸೀಮನ
ಹೊಲಬನರಿದು ಕೂಡಿದಾತನ ಮೃಡನು ಕಾಣಾ ರಾಮನಾಥ |

ಅಡಗನೊಳಗೆ ಹಾಲು ಅಡಗಿಪ್ಪ ಭೇದವನು
ಹಾಲೊಳಗೆ ತುಪ್ಪದ ಕಂಪು ಅಡಗಿಪ್ಪ ಪರಿಯನು
ಎಲೆ ಮೃಡನೆ, ನೀನು ಪ್ರಾಣಪ್ರಕೃತಿಯೊಳಡಗಿಹ ಭೇದವನು
ಲೋಕದ ಜಡರೆತ್ತ ಬಲ್ಲ ರೈ ರಾಮನಾಥ |

ಮಾಡಿದ ಕರ್ಮವ ನೋಡಯ್ಯ!
ಎನ್ನ ಮನದಣಿವನ್ನಕ್ಕ ಬೇಡೆನ್ನನು, ಮಾರ್ಕೊಳ್ಳೆನ್ನನು
ಮೇಲೆ ರೂಢಿಗೀಶ್ವರನ ಕೂಡುವೆನು
ನೀರಡಿಸಿದವನಂತೆ ರಾಮನಾಥ |

ಸರ್ಪನು ಕೂರ್ಮನು ದಿಕ್ಕರಿಗಳೆಂಟು
ಭೂಮಿಯ ಹೊತ್ತಿಹರೆಂಬುದು ಅಹರ್ನಿಶ
ಹೊತ್ತಿಪ್ಪವರಿಗೆ ಅತ್ತಲಾಧಾರವೇನು, ಇತ್ತಲಾಧಾರವೇನು?
ಉತ್ತರಗೊಡುವವರಿಗೆ ಇಕ್ಕುವೆ ಮುಂಡಿಗೆಯ
ಎತ್ತುವರುಳ್ಳರೆ ತೋರಿರೈ ರಾಮನಾಥನಲಿ |

ಗಂಡನುಳ್ಳಮ್ಮನ ಗೌರಿ ಎಂದು ಕಂಡಡೆ,
ಭೂಮಂಡಲಕ್ಕೆ ಅರಸಾಗಿ ಪುಟ್ಟುವನಾತನು
ಗಂಡನ್ನುಳ್ಳಮ್ಮನ ಒಡೆವೆರೆದಾತೆ
ನರಕದಲ್ಲಿ ದಿಂಡುಗೆಡೆದಿಪ್ಪನೈ ರಾಮನಾಥ ?

0 comments:

Related Posts Plugin for WordPress, Blogger...

Devara Dasimayya Blog Popular Posts

My Blog List

  • ರವೆಉಂಡೆ - Rava Unde / Sooji Laddu - *ಮಹಾಶಿವರಾತ್ರಿ ಹಬ್ಬದ ಶುಭಾಷಯಗಳು.* *ಮಹಾಶಿವರಾತ್ರಿ ಹಬ್ಬದ ಶುಭಾಷಯಗಳೊಂದಿಗೆ ರವೆಉಂಡೆ ತಯಾರಿಸುವ ಲಿಂಕ್ ಅನ್ನು ತಿಳಿಸಲಾಗಿದೆ, * *ಹಾಲಿನ ಪುಡಿಯ ಬದಲು ಸ್ವಲ್ಪ ಹಾಲನ್ನು ಬೆರೆಸಿ ಉಂಡೆ...
  • Milk Rasmalai - MILK RASMALAI INGREDIENTS: Milk powder—1 cup Condensed milk - 1/2tsp Milk - 1/2litre Egg – 1 Sugar – 2tbsp Baking powder -1/2 tsp METHOD: Heat milk ,brin...
  • Vegetable Tips - ತರಕಾರಿ ಟಿಪ್ಸ್ - *ತರಕಾರಿ ಟಿಪ್ಸ್:* ತರಕಾರಿ ಕೊಳ್ಳಲು ಮತ್ತು ಅದನ್ನು ಸಂಗ್ರಹಿಸಲು ಹೆಚ್ಚು ಮಹತ್ವ ಕೊಡಬೇಕು. ಇಲ್ಲಿ ಕೆಲವು ಅಂಶಗಳನ್ನು ತಿಳಿಸಿರುವೆ. ಅನುಕೂಲವಾದರೆ ಸಂತೋಷ. ತರಕಾರಿಗಳನ್ನು ಕೊಳ್ಳುವಾ...

Facebook Followers