Thursday, December 23, 2010

ದೇವರ ದಾಸಿಮಯ್ಯರ ಜೀವನ ಚರಿತ್ರೆ:


ದೇವಾಂಗ ಜನಾಂಗದಲ್ಲಿ ಮೊಟ್ಟ ಮೊದಲು ಪ್ರಸಿದ್ಧವಾದವರು ದೇವರ ದಾಸಿಮಯ್ಯ.
ಸೀರೆ ನೇಯುವ ಕೆಲಸದಿಂದ ಜೀವನ ಸಾಗಿಸುತ್ತಿದ್ದ ಇವರು ರಾಮನಾಥ ಎನ್ನುವ ನಾಮಂಕಿತವನ್ನು ಕೊಟ್ಟು ಅನೇಕ ವಚನಗಳನ್ನು ರಚಿಸಿದ್ದಾರೆ.
ತುಂಬಾ ಉಪಯುಕ್ತ ಮತ್ತು ತಮ್ಮ ದಿನನಿತ್ಯದ ಜೀವನಕ್ಕೆ ಸಂಭಂದಿಸಿದ ವಿಷಯಗಳ ಬಗ್ಗೆಯೆ ರಚಿಸಿದ ದೇವರ ದಾಸಿಮಯ್ಯ ಅವರ ವಚನಗಳು ತುಂಬಾ ಸರಳವಾಗಿ ಮನೆಸೂರೆಗೊಳ್ಳುತ್ತವೆ.

ಇವರು ದೇವಾಂಗ/ ದೇವ ಬ್ರಾಹ್ಮಣ ದವರಿಗೆ ಕುಲಗುರುವಾಗಿರುತ್ತಾರೆ, ಇದನ್ನು ಈಗಿನ ಎಲ್ಲಾ ದೇವಾಂಗ ಜನಾಂಗದವರು ತಮ್ಮ ಪೀಳಿಗೆಗಳಿಗೆ ತಿಳಿಸಿ ಹೇಳಬೇಕು. ಅವರ ಬಗ್ಗೆ ತಿಳಿಸಕೊಡಬೇಕು.
ಅನೇಕ ಪವಾಡಗಳನ್ನು ಮಾಡಿದ ಇವರು, ಪವಾಡವೊಂದೆ ಅಲ್ಲ, ಮನುಷ್ಯನ/ನಮ್ಮ ಜೀವನದಲ್ಲಿ ದೇವರ ಸ್ಮರಣೆಯೂ ಹಾಗೂ ಜೀವನದಲ್ಲಿ ಸಾಧನೆಯೂ ಅಷ್ಟೇ ಪ್ರಮುಖವೆಂದು ನಂಬಿ ಭಕ್ತಿ ಸಾಧನೆಯಲ್ಲಿಯೇ ಬಹಳ ಹೆಸರನ್ನು ಪಡೆದವರು, ಒಂದು ರೀತಿಯಲ್ಲಿ ಎಲ್ಲರಿಗೂ ಶಿಕ್ಷಕರಾಗಿದ್ದರು. ಅನೇಕ ಮಹಾನ್ ವ್ಯಕ್ತಿಗಳನ್ನು ತಮ್ಮ ಭಕ್ತಿಯ ವಾದದಿಂದ ಸೋಲಿಸಿ, ಆಗಿನ ಕಾಲದಲ್ಲಿಯೇ ಪ್ರಸಿದ್ಧಿ ಪಡೆದು ಹೆಸರಾದವರು. ಶಿವನ ದರ್ಶನದಿಂದ ವರವನ್ನು ಪಡೆದ ಇವರು ಸರಳ, ಸಜ್ಜನಿಕೆಯ ಸ್ವಭಾವದವರಾಗಿದ್ದು, ಎಲ್ಲರಲ್ಲಿಯೂ ಭಕ್ತಿಯ ಸಿಂಚನವನ್ನು ಸಿಂಪಡಿಸಿದರು. ಇವರ ಪತ್ನಿ ದುಗ್ಗಳೆಯೂ ಸಹ ಸತಿ ಶಿರೋಮಣಿಯಾಗಿ ಮಹಾ ಪ್ರತಿವ್ರತೆಯಾಗಿದ್ದು ತಮ್ಮ ಗಂಡನ ಜೊತೆಯಲ್ಲಿ ಆಕೆ ಕೂಡ ಭಕ್ತಿಯಲ್ಲಿ,ಸಂಸಾರದಲ್ಲಿ ಹೆಸರು ಮಾಡಿದವರು. ಇವರುಗಳ ಬಗ್ಗೆ ಹೆಚ್ಚಿಗೆ ಎಲ್ಲೂ ಪ್ರಚಾರಗಳಾಗಲಿ, ಪುಸ್ತಕಗಳಾಗಲಿ ಜಾಸ್ತಿ ಪ್ರಚಲಿತದಲ್ಲಿ ಇಲ್ಲದಿರುವುದೇ ನಮ್ಮ ದುರಾದೃಷ್ಠ. ಆಗಾಗಿ ಹೆಚ್ಚು ಬೆಳಕಿಗೆ ಬರಲಿಲ್ಲ, ಇವರ ಬಗ್ಗೆ ತಿಳಿದುಕೊಳ್ಳಲು. ಮುಂದಾದರು ಇಂತಹ ಮಹಾಸಾಧ್ವಿಗಳು ನಮ್ಮ ನಾಡಲ್ಲಿ ಇದ್ದರು ಎನ್ನುವುದಕ್ಕೆ ಕುರುಹುಗಳನ್ನು ಉಳಿಸುವುದು ನಮ್ಮ ಕರ್ತವ್ಯವಾಗಿದೆ. ಇತಿಹಾಸದಲ್ಲಿ,ಪುರಾಣದಲ್ಲಿ ಇವರ ಬಗ್ಗೆ ತಿಳಿಯಲು ಎಲ್ಲರು ಶ್ರಮಿಸಬೇಕು. ದೇವರ ದಾಸಿಮಯ್ಯನವರು ಶತ-ಶತಮಾನಗಳಿಂದ ಬಂದಂತಹ ದಕ್ಷಿಣ ಭಾರತದಲ್ಲಿ ಹೆಸರಾದ ಪ್ರಸಿದ್ಧ ಶರಣರಿಗಿಂತಲೂ, ಮೊದಲು ಬಂದಂತಹ ಮೊಟ್ಟ ಮೊದಲ ವಚನಕಾರರಾಗಿದ್ದಾರೆ. ಇವರೇ ವಚನಗಳಿಗೆ ತಳಹದಿ ನೀಡಿದವರು. ವಚನಗಳನ್ನು ತಮ್ಮ ಸಾಮಾಜಿಕ ಜೀವನದಲ್ಲಿಯೇ ಕಂಡುಕೊಂಡು ರಚಿಸಿದರು. ಸೀರೆ ನೇಯುತ್ತಾ ತಮ್ಮ ಪ್ರಾಪಂಚಿಕ ಜೀವನದಲ್ಲಿ ಸಂಸಾರ ಸಾಗಿಸುತ್ತಾ, ಭಕ್ತಿ ಮಾರ್ಗವೇ ಉನ್ನತ ಎಂದು ಸಾರಿದವರು.

Sunday, October 31, 2010

ಶ್ರೀ ದೇವರ ದಾಸಿಮಯ್ಯ-ದೇವಾಂಗ ಜನಾಂಗದ ಕುಲಗುರು

                           

   ಶ್ರೀ ದೇವರ ದಾಸಿಮಯ್ಯ-ದೇವಾಂಗ ಜನಾಂಗದ ಕುಲಗುರು
                                                          ಪ್ರಥಮ ವಚನಕಾರರು

Tuesday, June 15, 2010

ವಚನಗಳು/Vachanas,


ಕರಸ್ಥಲದ ಜ್ಯೋತಿಯದು,ಕರುವಿಟ್ಟೆರದವದು
ಅದರ ನೆಲೆಯ ತಿಳಿದರೆ ನಿಜಾನಂದವಿಹುದು
ಹೊಲಬುದೋರದಿಹ ನಿಸ್ಸೀಮನ
ಹೊಲಬನರಿದು ಕೂಡಿದಾತನ ಮೃಡನು ಕಾಣಾ ರಾಮನಾಥ |

ಅಡಗನೊಳಗೆ ಹಾಲು ಅಡಗಿಪ್ಪ ಭೇದವನು
ಹಾಲೊಳಗೆ ತುಪ್ಪದ ಕಂಪು ಅಡಗಿಪ್ಪ ಪರಿಯನು
ಎಲೆ ಮೃಡನೆ, ನೀನು ಪ್ರಾಣಪ್ರಕೃತಿಯೊಳಡಗಿಹ ಭೇದವನು
ಲೋಕದ ಜಡರೆತ್ತ ಬಲ್ಲ ರೈ ರಾಮನಾಥ |

ಮಾಡಿದ ಕರ್ಮವ ನೋಡಯ್ಯ!
ಎನ್ನ ಮನದಣಿವನ್ನಕ್ಕ ಬೇಡೆನ್ನನು, ಮಾರ್ಕೊಳ್ಳೆನ್ನನು
ಮೇಲೆ ರೂಢಿಗೀಶ್ವರನ ಕೂಡುವೆನು
ನೀರಡಿಸಿದವನಂತೆ ರಾಮನಾಥ |

ಸರ್ಪನು ಕೂರ್ಮನು ದಿಕ್ಕರಿಗಳೆಂಟು
ಭೂಮಿಯ ಹೊತ್ತಿಹರೆಂಬುದು ಅಹರ್ನಿಶ
ಹೊತ್ತಿಪ್ಪವರಿಗೆ ಅತ್ತಲಾಧಾರವೇನು, ಇತ್ತಲಾಧಾರವೇನು?
ಉತ್ತರಗೊಡುವವರಿಗೆ ಇಕ್ಕುವೆ ಮುಂಡಿಗೆಯ
ಎತ್ತುವರುಳ್ಳರೆ ತೋರಿರೈ ರಾಮನಾಥನಲಿ |

ಗಂಡನುಳ್ಳಮ್ಮನ ಗೌರಿ ಎಂದು ಕಂಡಡೆ,
ಭೂಮಂಡಲಕ್ಕೆ ಅರಸಾಗಿ ಪುಟ್ಟುವನಾತನು
ಗಂಡನ್ನುಳ್ಳಮ್ಮನ ಒಡೆವೆರೆದಾತೆ
ನರಕದಲ್ಲಿ ದಿಂಡುಗೆಡೆದಿಪ್ಪನೈ ರಾಮನಾಥ ?
Related Posts Plugin for WordPress, Blogger...

Devara Dasimayya Blog Popular Posts

My Blog List

Facebook Followers